Sunday, September 24, 2017

4. ಗೋಸೇವಾ ವರ್ಲ್ಡ ಎಲ್ಲರಿಗೂ ಏಕೆ ಬೇಕು?GWK

4ಗೋಸೇವಾ ವರ್ಲ್ಡ ಎಲ್ಲರಿಗೂ ಏಕೆ ಬೇಕು?

ನಮ್ಮ ಹಸುವಿನ ರಕ್ಷಣೆ ಒಟ್ಟು ಪರಿಸರದ ರಕ್ಷಣೆಗೆ ಸಮವಾಗಿರುತ್ತದೆ. ಅದು ಎಲ್ಲರಿಗೂ ಹಸಿರು ಪ್ರಪಂಚವನ್ನು ನೀಡುತ್ತದೆ.  ಅದು ಹೇಗೆ?

ನಾವೆಲ್ಲರೂ ಕೇಳಿರುತ್ತೇವೆ, ನಮ್ಮ ದೇಶದ ಧ್ಯೇಯವಾಕ್ಯವಾಸ ಜೈ ಜವಾನ್.... ಜೈ ಕೆಸಾನ್ ಇವರಿಬ್ಬರೇ ನಿಜವಾದ ಹಿರೋಗಳು.  ಯಾವುದೇ ಧರ್ಮ, ಜಾತಿ ಎಂದೇಣಿಸದೇ    ರೈತ ಆಹಾರವನ್ನು ನೀಡುತ್ತಾ ಮತ್ತು ಸೈನಿಕರು ೨೪* ನಮ್ಮ ದೇಶವನ್ನು  ರಕ್ಷಸುತ್ತಾರೆ.  "ನಮ್ಮ ದೇಶದ ಬೆನ್ನೆಲುಬು ರೈತ.  ಅದೇ ರೀತಿ, ರೈತರ ಬೆನ್ನೆಲುಬು ಹೈನುಗಾರಿಕೆ ಮತ್ತು ಬೆಳೆಗಳು". 

ಹಾಲಿನ ಮೂಲನೇ ಹಸು ( ನಮ್ಮ ದೈನಂದಿನ ಜೀವನದಲ್ಲಿ ದಿನದ ಪ್ರಾರಂಭದಿಂದ ಮುಗಿಯುವವರೆಗೂ ಯಾವುದೇ ಒಂದು ಹಾಲಿನ ಉತ್ಪನ್ನ ಬಳಸದೇ ಕೊನೆಯಾಗುವುದಿಲ್ಲ)  ಕೃಷಿಗೆ ಮೂಲ ಹಸು/ಎತ್ತು.   ಇವು ಯಾರೊಬ್ಬರ  ಜಾತಿ ಮತ್ತು ಧರ್ಮವನ್ನು ನೋಡದೇ  ಎಲ್ಲರಿಗೂ  ಪ್ರೀತಿಯನ್ನು-ಸಹಾಯವನ್ನು-ಸೇವೆಯನ್ ನು ಮಾಡುತ್ತವೆ.

ರೈತರು ನಮಗೂ ಹಾಗೂ ಇತರ ದೇಶದ ಎಲ್ಲಾ ಜನರಿಗೂ ಆಹಾರವನ್ನು ನೀಡುತ್ತಾರೆ.  ಅವರೇ ನಮ್ಮ ನಿಜವಾದ ನಾಯಕರು (ನಮ್ಮ ಸೈನಿಕರು ೨೪* ನಮ್ಮನ್ನು ರಕ್ಷಿಸುವುದರ ಜೊತೆಗೆ ದೇಶವನ್ನು ಕಾಪಾಡುತ್ತಾರೆ). ಹಸುಗಳು ಕೇವಲ ಆಹಾರವನ್ನು ತೆಗೆದುಕೊಳ್ಳುತ್ತವೆ (ಯಾವುದು ನಮಗೆ ಬೇಕಾಗಿಲ್ಲವೋ),  ಆದರೆ ಅವು ನಮ್ಮ ಪರಿಸರಕ್ಕೂ ಹಾಗೂ ಹಲವಾರು ಮನುಷ್ಯರಿಗೆ ತುಂಬಾ ಮೌಲ್ಯಯುತವಾದ ಉತ್ಪನ್ನಗಳನ್ನು (ಅಂದರೆ ಹಾಲು, ಮೊಸರು,ತುಪ್ಪ, ಗೋಮೂತ್ರ, ಸಗಣಿ ...ಇತರೆ) ನೀಡುತ್ತವೆ. ಪ್ರಪಂಚದಲ್ಲಿ  ಹಸು ಮಹತ್ವದ ಆಸ್ತಿ ಎಂದು ಯಾವುದೇ ಸಂಶಯವಿಲ್ಲದೇ ಹೇಳಬಹುದು

 ಕೇವಲ ಕಲ್ಪಿಸಿಕೊಳ್ಳಿ, ಹಸು ನಿಮ್ಮ ಜೊತೆ ಮಾತನಾಡಿದರೇ?



ನಾವು ಒಂದು ಕ್ಷಣ ಯೋಚಿಸೋಣವೇ, ಹಸು ನಿಮ್ಮ ಜೊತೆ ಮಾತನಾಡಿದರೇ ನಮಗೆ ಏನನ್ನು ಹೇಳಬಹುದು

ಅದು ನಿಮ್ಮ
ಧರ್ಮ
ವೃತ್ತಿ
ಜಾತಿ
ಭಾಷೆ
ನೀವು ಮುದುಕರಾ ಅಥವಾ ಹರೆಯದವರಾ
ನೀವು ಬಡವರಾ ಅಥವಾ ಶ್ರೀಮಂತರಾ
ನೀವು ಸಹಾಯ ಮಾಡುವವರಾ ಅಥವಾ ಸಹಾಯ ಮಾಡದವರಾ
ನೀವು ಒಳ್ಳೆಯವರಾ ಅಥವಾ ಕೆಟ್ಟವರಾ
ನೀವು ಅಂದವಾಗಿರುವಿರಾ ಅಥವಾ ಇಲ್ಲವಾ
ನೀವು ನಾಯಕನ ಸ್ಥಾನದಲ್ಲಿರುವಿರಾ ಅಥವಾ ಕೊನೆಯ ಸ್ಥಾನದಲ್ಲಿರುವುರಾ 
ನೀವು ಯಶಸ್ಸಿನವರಾ ಅಥವಾ ಸೋಲಿನವರಾ
ಎಂಬ ವಿಷಯದ್ದಾಗಿರುವುದಿಲ್ಲ.

ನಮಗೆ ಎಲ್ಲರೂ ಒಂದೇ(ಹಸುಗಳು).  ನಮಗೆ ನಿಮ್ಮ (ಮನುಷ್ಯರ) ಹಾಗೆ ಯಾವುದೇ ಸವಲತ್ತುಗಳು ಬೇಕಾಗಿಲ್ಲ.

• ವಿಧ-ವಿಧವಾದ ಆಹಾರ ಬೇಕಾಗಿಲ್ಲ
ವಿಧ-ವಿಧವಾದ ಸಾರಿಗೆ ವಾಹನಗಳು ಬೇಕಾಗಿಲ್ಲ
ವಿಧ-ವಿಧವಾದ ಬಟ್ಟೆಗಳು ಬೇಕಾಗಿಲ್ಲ
ವಿಧ-ವಿಧವಾದ ತಂತ್ರಜ್ಞಾನ ಬೇಕಾಗಿಲ್ಲ

ನಾವು ಮನುಷ್ಯರಿಗೆ ಬೇಕಾಗಿಲ್ಲದ ಆಹಾರವನ್ನು (ಹುಲ್ಲು) ಮಾತ್ರ ತೆಗೆದುಕೊಳ್ಳುತ್ತೇವೆ.  ಆದರೆ ಪ್ರಪಂಚಕ್ಕೆ ನಾವು ನಿಮಗಿಂತಲೂ ತುಂಬಾ ಉಪಯುಕ್ತವಾದವುಗಳನ್ನು ನೀಡುತ್ತೇವೆ. ಪ್ರಪಂಚಕ್ಕೆ ಹಸು ಒಂದು ಅದ್ಬುತವಾದ ಕೊಡುಗೆ ಎಂದು ಯಾವುದೇ ಸಂಶಯವಿಲ್ಲದೇ ಹೇಳಬಹುದು. ಇದಕ್ಕೆ ಬೆಂಬಲಿಸಬೇಕಾ, ಬೇಡವಾ ಎಂಬುದು ಈಗ ನಿಮ್ಮ ಕೈಯಲ್ಲಿದೆ

‌ 

ಬನ್ನಿ ಹೇಳೋಣ ***ಎಲ್ಲರಿಗೂ ಹಸು***  ಜೈ ಕಿಸಾನ್...ಜೈ ಜವಾನ್...ಜೈ ಗೋಮಾತಾ





No comments: